ಸಂಘದ ಗುರಿ ಹಾಗೂ ಉದ್ದೇಶ:

1. ಸಾಮಾಜಿಕ ಸಮಸ್ಯೆಗಳು ಹಾಗೂ ಅನಿಷ್ಟ ಪದ್ದತಿಗಳ ವಿರುದ್ಧ ಕಲಾ ಮಾರ್ಗವಾಗಿ ಚಳವಳಿ ನಡೆಸುವುದೇ ಸಂಘದ ಅತಿ ಮುಖ್ಯವಾದ ಗುರಿ ಹಾಗೂ ಉದ್ದೇಶ.

2. ಭಾರತೀಯ ಕ್ಲಾಸಿಕಲ್ ನೃತ್ಯ ಹಾಗೂ ಕಾಂಟೆಂಪರರಿ ಡಾನ್ಸ್ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವಂತಹ ನೃತ್ಯ ಪ್ರದರ್ಶನಗಳನ್ನು ಆಯೋಜಿಸುವುದು. ಆ ಮೂಲಕ ನೃತ್ಯ ಮಾರ್ಗವಾಗಿ ಸಾಮಾಜಿಕ ಚಳವಳಿ ನಡೆಸುವುದು.

3. ಬಾಲಕಾರ್ಮಿಕ ಪದ್ದತಿ, ಕೌಟುಂಬಿಕ ದೌರ್ಜನ್ಯ, ಅಸ್ಪೃಶ್ಯತೆ... ಮುಂತಾದ ಸಾಮಾಜಿಕ ಸಮಸ್ಯೆಗಳ ಕುರಿತು ನೃತ್ಯ ಮಾರ್ಗವಾಗಿ ಜನರಿಗೆ ತಿಳುವಳಿಕೆ ನೀಡುವುದು. ಅದರ ಜೊತೆಗೆ ಕೋಮು ಸೌಹಾರ್ದತೆ ಹಾಗೂ ರಾಷ್ಟ್ರಪ್ರೇಮದ ಕುರಿತು ಕೂಡ ಕಾರ್ಯಕ್ರಮಗಳನ್ನು ರೂಪಿಸಿ, ಪ್ರದರ್ಶಿಸುವುದು.

4. ಭಾರತೀಯ ಸಂವಿಧಾನದ ಚೌಕಟ್ಟಿನಲ್ಲಿ ದುರ್ಬಲ ವರ್ಗದವರಿಗಾಗಿ ರೂಪುಗೊಂಡಿರುವ ಅನೇಕ ಕಾನೂನುಗಳ ಕುರಿತು ನೃತ್ಯ ರೂಪಕಗಳ ಮೂಲಕ ಜನರಿಗೆ ತಿಳುವಳಿಕೆ ನೀಡುವ ಪ್ರಯತ್ನ ಮಾಡುವುದು.

5. ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಅನೇಕ ಸಾಮಾಜಿಕ ಸಮಸ್ಯೆಗಳ ಜ್ಞಾನವನ್ನು ನೃತ್ಯ ಪ್ರದರ್ಶನಗಳ ಮೂಲಕವೇ ನೀಡುವ ಜೊತೆಗೆ ಅಂತಹ ಅನಿಷ್ಟಗಳನ್ನು ತಡೆಯಲು ಭಾರತೀಯ ಸಂವಿಧಾನದಲ್ಲಿರುವ ಕಾನೂನುಗಳನ್ನು ವಿವರಿಸುವುದು.

6. ಭಾರತೀಯ ಕ್ಲಾಸಿಕಲ್ ನೃತ್ಯ ಪ್ರಕಾರಗಳ ಚೌಕಟ್ಟಿನಲ್ಲಿ ಇದ್ದುಕೊಂಡೇ ಕಾಂಟೆಂಪರರಿ ಡಾನ್ಸ್ ಪ್ರಕಾರವನ್ನು ನೃತ್ಯ ಪ್ರದರ್ಶನದಲ್ಲಿ ಮೇಳೈಸುವುದು. ಇದನ್ನು ನಾವು "ಕ್ಲಾಸಿಕಲ್ ಕಾಂಟೆಂಪರರಿ" ಎಂದು ಕರೆಯುತ್ತೇವೆ. "ಕ್ಲಾಸಿಕಲ್ ಕಾಂಟೆಂಪರರಿ" ಎನ್ನುವ ವಿಭಿನ್ನ ನೃತ್ಯ ಪ್ರಕಾರವೇ ಸಂಘದ ಕಲಾ ಮಾರ್ಗ.

7. ಕ್ಲಾಸಿಕಲ್ ಕಾಂಟೆಂಪರರಿ ನೃತ್ಯದ ಬಗ್ಗೆ ಶಿಬಿರ ಹಾಗೂ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಹೊಸ ತಲೆಮಾರಿನವರಿಗೆ ಭಾರತೀಯ ಕ್ಲಾಸಿಕಲ್ ನೃತ್ಯ ಹಾಗೂ ಕಾಂಟೆಂಪರರಿ ನೃತ್ಯ ಜೊತೆಜೊತೆಯಾಗಿ ಸಾಗುವುದು ಖಂಡಿತ ಸಾಧ್ಯವೆಂದು ಅರಿವು ಮೂಡಿಸುವುದು.

8. ಪರಿಣತ ನೃತ್ಯ ಕಲಾವಿದರಿಂದ ಪ್ರದರ್ಶನ ಏರ್ಪಡಿಸುವ ಜೊತೆಗೆ ಸಂಘದ ಕಲಾವಿದರಿಗೆ ಪರಿಣತರಾದ ಹಿರಿಯ ಕಲಾವಿದರಿಂದ ಮಾರ್ಗದರ್ಶನ ದೊರಕಿಸಿಕೊಡುವುದು. ಆ ಮೂಲಕ ಸಂಘದ ಕಲಾವಿದರು ನೃತ್ಯದಲ್ಲಿ ಪರಿಪಕ್ವವಾಗುವಂತೆ ಮಾಡುವುದು.

9. ಸಂಘದ ಸದಸ್ಯರಲ್ಲಿ ಹೆಚ್ಚಿನವರು ನೃತ್ಯ ಕಲಾವಿದರೇ ಆಗಿರುತ್ತಾರೆ; ಆದ್ದರಿಂದ ಅವರಿಗೆ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಿಕೊಡುವುದು.

10. ನೃತ್ಯದ ಮೂಲಕ ಸಾಮಾಜಿಕ ಸ್ವಸ್ಥತೆ ಸಾಧ್ಯವೆಂದು ಸಾಬೀತುಪಡಿಸುವ ಪ್ರಯತ್ನವು ಸಂಘದ್ದಾಗಿರುತ್ತದೆ. ಅದಕ್ಕೆ ತಕ್ಕ ರೀತಿಯಲ್ಲಿ ಸಂಘದ ಚಟುವಟಿಕೆಯನ್ನು ರೂಪಿಸುವುದು.